ಹರಿಯುವ ನೀರು ಸ್ವಚ್ಛಂಧ,
ಹಾರುವ ಅಲೆಗೆ, ಹೀರುವ ಸುಳಿಗೆ
ಎಲ್ಲಿದೆ ಕಡಲ ನಿರ್ಭಂಧ?
ಒಂದು ಬಿಂದು ಹೋಗಿ ಸುತ್ತಲು,
ಬಿತ್ತು ಕೆಳಗೆ, ಕಪ್ಪೆಚಿಪ್ಪಿನೊಳಗೆ
ಸುತ್ತ ಏಕೆ ಕಪ್ಪು ಕತ್ತಲು?
ಇರುವುದೆ ಅಲ್ಲೆ? ಸಿಗುವುದೆ ಕಾಲದ ಸೆರೆಗೆ?
ಬರಿ ಕರಿ ಛಾಯೆ; ಅಂಧಕಾರದಲ್ಲಿದೆಯೆ ಮಾಯೆ?
ಮುತ್ತಾಗಿರುವುದೆ ಬಂದಾಗ ಕಡಲ ಹೊರಗೆ?
English Translation:
Water is carefree
a jumping wave,
dancing whirlpool,
have no restrictions at sea.
There was one such tiny
drop of water,
which fell into an oyster shell
and was lost in darkness forever.
Is it just darkness?
Or is darkness an illusion?
Is it lost forever?
Or will it be found,
Or will it be found,
transformed into a pearl?
2 comments:
Nice Poem kane..
was reading ur blog after long time...
Really nice one dear.
Post a Comment