ಮುಂಜಾನೆ ಬೆಳಕಲ್ಲಿ
ಹಸುರಿನ ನಡುವಲ್ಲಿ
ಚಾಚಿದ ಎಲೆಯಾಗಿ
ಇಬ್ಬನಿ ಹಿಡಿಯಲು ಎಷ್ಟು ಚೆನ್ನ!
ಸೂರ್ಯನ ಕಿರಣಗಳು,
ಸೋಂಕಿದ ಕಡೆಯೆಲ್ಲ
ವಜ್ರದ ಹೊಳಪಾಗೊ
ನೀರಾಗಿ ಹರಿಯಲು ಎಷ್ಟು ಚೆನ್ನ!
ಅರ್ಕನ ಸುಂದರ
ಮೊಗವನ್ನು ಕಂಡೊಡೆ
ಮೆರಗಿಂದ ಹಾಡುವ
ಹಕ್ಕಿಯ ಧನಿಯಾಗಲು ಎಷ್ಟು ಚೆನ್ನ!
ನೇಸರನು ನಲಿವಿಂದ
ಭುವಿಯನ್ನು ಬೆಳಗಿರಲು
ಮೆಲ್ಲನೆ ಅರಳುವ
ಹೂವಿನ ನಗೆಯಾಗಲು ಎಷ್ಟು ಚೆನ್ನ!
ಹಸುರಿನ ನಡುವಲ್ಲಿ
ಚಾಚಿದ ಎಲೆಯಾಗಿ
ಇಬ್ಬನಿ ಹಿಡಿಯಲು ಎಷ್ಟು ಚೆನ್ನ!
ಸೂರ್ಯನ ಕಿರಣಗಳು,
ಸೋಂಕಿದ ಕಡೆಯೆಲ್ಲ
ವಜ್ರದ ಹೊಳಪಾಗೊ
ನೀರಾಗಿ ಹರಿಯಲು ಎಷ್ಟು ಚೆನ್ನ!
ಅರ್ಕನ ಸುಂದರ
ಮೊಗವನ್ನು ಕಂಡೊಡೆ
ಮೆರಗಿಂದ ಹಾಡುವ
ಹಕ್ಕಿಯ ಧನಿಯಾಗಲು ಎಷ್ಟು ಚೆನ್ನ!
ನೇಸರನು ನಲಿವಿಂದ
ಭುವಿಯನ್ನು ಬೆಳಗಿರಲು
ಮೆಲ್ಲನೆ ಅರಳುವ
ಹೂವಿನ ನಗೆಯಾಗಲು ಎಷ್ಟು ಚೆನ್ನ!
ಚಿನ್ನದ ಬೆಳಕು
ಬಣ್ಣವ ತುಂಬಿರಲು
ಹರುಷದಿಂದಾಡುವ
ಚಿಟ್ಟೆಯಂತಾಗಲು ಎಷ್ಟು ಚೆನ್ನ!
ಪ್ರತಿ ಮನೆಯ ಮುಂಗಡೆ
ಬೆಳಗಿನ ಸಂಭ್ರಮದ
ಶುಭಸೂಚಿಯಂತಿರುವ
ರಂಗವಲ್ಲಿಯಾಗಲು ಎಷ್ಟು ಚೆನ್ನ!
ಬೆಳಕು ಹರಿದಿರುವಾಗ,
ಆನಂದ ತುಂಬಿರಲು
ಪ್ರಕ್ರುತಿಯೊಡಗೂಡಿ
ನೇಸರನ ಸ್ವಾಗತಿಸಲು ಎಷ್ಟು ಚೆನ್ನ!
6 comments:
very good fotos..
and nice kavithe.
keep it gng
;-)
vidya
:(((!!
Care to translate in English??
Sohail
Great photos!!
Sohail
Brinzy...
pls put the translation in english...guess you have a huge fan following in this lang. too..:)
Cute poem shwetha...Awesome imaginative power u have got....Good collection of photos...
Now I know why you were asking me to visit ur Blog....
Raji
ನಿಮ್ಮ ಕವಿತೆ ಚೆನ್ನಾಗೆದೆ.... ಆದರೆ
ಸೂರ್ಯನ ಕಿರಣಗಳು,
ಸೋಂಕಿದ ಕಡೆಯೆಲ್ಲ
ವಜ್ರದ ಹೊಳಪಾಗೊ
ನೀರಾಗಿ ಹರಿಯಲು ಎಷ್ಟು ಚೆನ್ನ!
ಈ ಸಾಲುಗಳಲ್ಲಿ.... ಆ ಸೋಂಕಿದ ಕಡೆಯೆಲ್ಲ ಅನ್ನೊ ಬದಲು... ಸೊಕಿದ ಕಡೆ ಅಂತಾ ಇದ್ದರೆ ಇನ್ನು ಚೆನ್ನ.... ಯಾಕಂದ್ರೆ ಸೋಂಕು ಅನ್ನೋದು ... ಒಂದರಿಂದ ಇನ್ನೊಂದಕ್ಕೆ ಹರಡುತ್ತೆ... ಉದಾ:ರೋಗ, ವೈರಸ್...
ಆದ್ರೆ ಸೂರ್ಯನ ಕಿರಣನು ಎಲ್ಲ ಕಡೆ ಹರಡುತ್ತೆ ಆದ್ರು... ಈ ಪದ ಇಲ್ಲಿ ಅಪಸ್ವರ ಆಗಿ ಕಾಣುತ್ತೆ.....
Post a Comment